ಸ್ವ-ಗತ

ಅಗಸ್ಟ್ 4, 2007 at 8:22 am (ಕವನ)

rangolismall.gif

ನಸುಬೆಳಕಿನಲ್ಲಿ, ಉಷೆಯಾಗಮನದ
ಸಮಯದಲ್ಲಿ, ಹಕ್ಕಿಗಳ ಕಲರವದಲ್ಲಿ
ಉದಯರಾಗವನ್ನು ಹಾಡುತ್ತಾ
ಮು೦ಜಾನೆಯೆದ್ದು
ಅ೦ಗಳದಿ ಚುಕ್ಕಿಯನ್ನಿಡುತ್ತಾ
ನಯನಮನೋಹರ ಭ೦ಗಿಯಿ೦ದ
ನನ್ನನ್ನು ಸೆಳೆದ ಸು೦ದರಿಯೇ
ನೀ ಯಾರೆ ???

ಬ್ರಹ್ಮನತಿಶಯದ ಸೃಷ್ಠಿ
ಆದರೂ, ಅನುಮಾನ ಶ೦ಕೆ
ಸಾಧ್ಯವೇ ಬ್ರಹ್ಮನಿ೦ದ ಇದು ?

ಆಗತಾನೇ ಅರಳಿದ ತಾವರೆಯ ಮುಖ
ಬೆರಳಿಗ್‍ಹೊ೦ದಿಕೊ೦ಡಿರುವ ನೀಳ ನಖ
ಕೆನ್ನೆಯೋ..,
ಕೆಸರಿನಲ್ಲಿರುವ ಕಮಲದಾ ಪುಕ್ಕ !

ಆಗಸದಿ ಮಿ೦ದಿರುವ ಪಕ್ಷಿಗಳ ದಿ೦ಡು
ನೀ ನೈಯ್ಯುತ್ತಿರುವೆ ಮಲ್ಲಿಗೆಯ ದ೦ಡು
ಬರುವಾಗ ನಾನಿನ್ನ ಕ೦ಡು
ಎದವಿದೆನಾ ತಾಕಿ ಕಲ್ಲ ಗು೦ಡು
ಇದು ನಿನ್ನ ವರ್ಣನೆಯೋ, ನನ್ನ ಮಿಡಿತವೋ,
ಅಳಲೋ, ಅನಿಸಿಕೆಯೋ, ನಾಕಾಣೆ
ಒಟ್ಟಿನಲ್ಲಿ,
ಇದೊ೦ದು ಗಾರ್ಧಭಗಾನ; ಗಾರ್ಧಭಕ್ಕಾಗಿ ಗಾನ

Post a Comment