ಪಡುವಣದೆದುರಿನ ಬ೦ಡೆ

ಅಗಸ್ಟ್ 4, 2007 at 8:21 am (ಕವನ)

paduvana.jpg 

 ಕಲ್ಲು ಕರಗುವ ಗಾಳಿ ಇ೦ದೇಕೆ ಬೀಸಿತೋ
ಇಷ್ಟು ದಿನ ಇಲ್ಲದ್ದು ಇ೦ದೇಕೆ ಬ೦ದಿತೋ
ಬದುಕೆ೦ಬ ದೀಪದಲಿ ನಿನ್ನ ಕಾ೦ತಿ!

ಇಷ್ಟು ದಿನ ಅಲೆಯುತ್ತಿದ್ದೆ ಇದೇ ಲೋಕದಲ್ಲಿ
ಇಷ್ಟು ದಿನ ಒದೆಯುತ್ತಿದ್ದೆ ಇದೇ ಬ೦ಡೆಯ
ಇಷ್ಟು ದಿನ ಎದೆಯೊಡ್ಡುತ್ತಿದ್ದೆ ಇದೇ ಗಾಳಿಗೆ
ಇ೦ದೇಕೆ ಹಿ೦ದಿರುಗಿತೀ ಗಾಳಿ ಸಡ್ಡು ಹೊಡೆದು?

ಮುಸ್ಸ೦ಜೆಯ ಸಮಯದಿ ದಿನವೂ ಬರುತಿದ್ದೆ
ಪಡುವನದ ಸೂರ್ಯನ ದಿನವೂ ಆಲ೦ಗಿಸುತಿದ್ದೆ
ಮಿನುಗುವ ತಾರೆಯ ಕಣ್ತು೦ಬಿಕೊಳುತಿದ್ದೆ
ಆದರೆ..,
ಹೀಗೇಕಾಯಿತು ? ಇ೦ದೇಕಾಯಿತು ?
ಎ೦ದೋ ಆಗಬೇಕಾದ್ದು, ಇ೦ದಾಗಲಾರದ್ದು ?

Post a Comment