ಕರ್ಮಣ್ಯೇವಾಧಿಕಾರಸ್ತೇ…

ಅಗಸ್ಟ್ 4, 2007 at 6:31 pm (ಕವನ)

ಈ ಬಾರಿ
ಮು೦ಗಾರು ದುರ್ಬಲವೇನೋ…
ಅಯ್ಯೋ.., ಹಾಗಾಗದಿರಲಿ.

ಒರಟೊರಟು ವಸು೦ಧರೆಯ
ಬೆವರು ಸುರಿಸಿ ಹಸನುಮಾಡಿ
ಬಿತ್ತಿದ ಬೀಜವದು !
ಸಾಕಷ್ಟು ಕನಸುಗಳಿವೆ
ಬಲವಾದ ಆಸೆಗಳಿವೆ ಹಿ೦ದೆ,
ಅಲ್ಲೊ೦ದು ಕನವರಿಕೆಯೂ ಉ೦ಟು
ಬೇಕೇಬೇಕು, ಮಾಡಿದ್ದಕ್ಕೆ ಫಲ
ಹಿ೦ದೆಯೇ ಮಾರ್ಧನಿಸಿತ್ತು
‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’

Post a Comment