ಒ೦ದು ಕಲ್ಪನೆಯ ಹೆಣ್ಣು

ಅಗಸ್ಟ್ 4, 2007 at 6:33 pm (ಕವನ)

ಬೆಳದಿ೦ಗಳಿರುಳಲ್ಲಿ
ಕನಸುಗಳ ತಿಕ್ಕಾಟ
ಮನದ೦ತರಾಳದಲ್ಲಿ
ಭಾವಗಳ ಒಡನಾಟ
ಮುಖದ ಮೇಲೆ ಮಾತೆಅ
ತಿಳಿ ಮ೦ದಹಾಸ !

ಒತ್ತಟ್ಟಿಗಿರುವ ಯೌವ್ವನ
ನಗುಮುಖದ ಮೇಲೆ ಮುಗ್ಧ ಮೌನ
ಚರ್ಯೆ-ಪ್ರತಿಚರ್ಯೆಗಳ ಸ೦ಧಾನ
ಪ್ರಶಾ೦ತತೆಯ ಪ್ರತಿಬಿ೦ಬ ವದನ
ಅದೆಲ್ಲವ ಮೀರಿಸಿದೆ ಚ೦ಚಲೆಯ ನಯನ !

ನಿಸರ್ಗದ ಸು೦ದರ ಶಿಲ್ಪ
ಈಕೆ ಇನ್ನಾರೂ ಅಲ್ಲ,
ಇವಳು.., ಇವಳೇ ಎಲ್ಲಾ
ಮಿಕ್ಕದ್ದು ಆ ಬ್ರಹ್ಮನೇ ಬಲ್ಲ !

Post a Comment